ಬುದ್ಧ ಪ್ರಜ್ಞೆಯ ಕೆ.ಎಚ್.ರಂಗನಾಥ್
12 Oct 2011 Leave a Comment
in ಬುದ್ಧ ಪ್ರಜ್ಞೆಯ ಕೆ.ಎಚ್. ರಂಗನಾಥ್
ಇಂದು ಜನಸಾಮಾನ್ಯರಲ್ಲಿ ರಾಜಕೀಯ ಬಗ್ಗೆ ನಿರಾಸಕ್ತಿ ಮೂಡುತ್ತಿದೆ. ನೂರಾರು ಕನಸು ಬಯಕೆಗಳನ್ನು ಹೊತ್ತು ಕಾಲಗಳನ್ನು ಪಕ್ಷಗಳನ್ನು ಕಾದ ಪ್ರಜೆ ಭ್ರಮನಿರಸನ ಹೊಂದಿದ್ದಾನೆ. ತಾನು ದುಡಿವ ತೊಳಿಗಿಷ್ಟು ವಿಶ್ರಾಂತಿ ದೊರೆತಿತೆ? ನನ್ನ ಶ್ರಮಕ್ಕಿಷ್ಟು ಪ್ರತಿಫಲ ದೊರೆತಿತೆ? ಎಂದು ಕಣ್ಣರಳಿಸಿದ ಸಮುದಾಯ ಒಂದು ಬಗೆಯ ಯಾತನೆಗೊಳಗಾಗಿದೆ. ಸಾವನ್ನು ಎದುರು ನೋಡುವ ರೋಗಿಯಂತೆ ಜನ ತಟಸ್ಥರಾಗುತ್ತಿದ್ದಾರೆ. ತಮಗಾಗುತ್ತಿರುವ ಅನಾನುಕೂಲತೆಗಳಾಗಲಿ, ಶೋಷಣೆಗಳಾಗಲಿ ಅವರಲ್ಲಿ ಹೋರಾಟ ಮಾಡುವ ಮನಸ್ಸನ್ನು ಎಚ್ಚರಗೊಳಿಸದಾಗಿದೆ. ಎಲ್ಲ ಅನ್ಯಾಯವೂ ಸ್ವಾಭಾವಿಕವಿಸುವ ವಾತಾವರಣದ ಹೆರಿಗೆಯಾಗಿದೆ. ಡಾ.ಜಾನ್ಸನ್ ಎಂಬ ವಿದ್ವಾಂಸನು ರಾಜಕೀಯವೆಂಬುದು ಫಟಿಂಗನ ಕೊನೆಯ ಆಸರೆ ಎಂದು ಹೇಳಿರುವುದು ಸರಿ ಎಂಬಂಥ ಭಾವನೆ ಅನೇಕರಲ್ಲಿ ಭಾಗಿಯಾಗಿದೆ. ಇದಕ್ಕೆ ನಮ್ಮ ರಾಜಕೀಯ ನಾಯಕರು ಮೂಲ ಹೊಣೆಯಾಗಿದ್ದಾರೆ. ಅಧಿಕಾರಕ್ಕೆ ಬರಲು ಅವರು ನಡೆಸುವ ಪ್ರಜಾಪ್ರಭುತ್ವ, ವಿರೋಧಿ ಗುಣಗಳು ಅಧಿಕಾರದ ನಂತರವೂ ಜೀವಂತಿಕೆ ಪಡೆಯುತ್ತಿವೆ. ಅಜ್ಞಾನ, ಸ್ವಜನ ಪಕ್ಷಪಾತ, ಕುಟುಂಬ ಪ್ರೇಮ, ಪುತ್ರವ್ಯಾಮೋಹ, ಭ್ರಷ್ಟತನ ಇತ್ಯಾದಿ ಆಘಾತಕಾರಿ ಅಂಶಗಳನ್ನು ತಮ್ಮ ಘನತೆಗಳಾಗಿ ಮಾಡಿಕೊಳ್ಳುವ ರಾಜಕಾರಣಿಗಳೇ ಹೆಚ್ಚು ದುಡ್ಡು, ಭೂಮಿ ಬಾಚಲು ಹಗಲು ದರೋಡೆಗಿಳಿದಿರುವರು ಸಾಲು ಸಾಲಾಗಿ ಕಂಬಿ ಎಣಿಸುತ್ತಿದ್ದಾರೆ. ಈ ಕಾರಣದಿಂದ ಸಾಮಾನ್ಯ ಜನರಿಗೆ ರಾಜಕೀಯ ರಾಜಕಾರಣಿ ಎಂಬುವ ಬೇಸರ ಅಸಹ್ಯಗಳುಂಟಾಗುವಂತೆ ಮಾಡಿದೆ. ಇಂಥ ವ್ಯವಸ್ಥೆಯಲ್ಲಿ ರಾಜಕೀಯವನ್ನು ಎದೆಯಾಳದಿ ಪಾಲಿಸುವ ಹಾಗೂ ಸಮಾಜವನ್ನು ವಿಕಾಸದೆಡೆ ಕೊಂಡೊಯ್ಯುವ ರಾಜಕಾರಣಿಗಳು ವಿರಳ ಅಂಥ ರಾಜಕಾರಣಿಗಳಲ್ಲಿ ಸಂತಮನಸ್ಸಿನ ಪ್ರಬುದ್ಧ ಚಿಂತಕ ಬುದ್ಧ ಪ್ರಜ್ಞೆಯ ಕೆ.ಎಚ್.ರಂಗನಾಥ್ ಅವರು ಗಮನಾರ್ಹರಾಗಿದ್ದಾರೆ.
ಕೆ.ಎಚ್.ರಂಗನಾಥ್ ಅವರು ಸಮತೆ, ಕಾರುಣ್ಯಕ್ಕೆ ನೀಡುವ ಒತ್ತು ಭೂಮಿ ತೂಕದಂತಿದೆ. ಶಿಕ್ಷಣವಾಗಲಿ ಮತ್ಯಾವುದೇ ಜ್ಞಾನವಾಗಲಿ ಅದು ವ್ಯಕ್ತಿಯನ್ನು ಅನೇಕ ಸಂಕೊಲೆಗಳಿಂದ ಬಿಡುಗಡೆ ಮಾಡುವುದು ಅನನ್ಯವಾಗಿರುತ್ತದೆ. ಶಿಕ್ಷಣ ಕಲಿತವನು ಜಾತಿ, ಮತ, ಮೌಢ್ಯಗಳನ್ನು ಉಲ್ಲಂಘಿಸಿದ್ದೇ ಆದರೆ ಶತ ಶತಮಾನದಿಂದ ಇಂಥ ಪಿಡುಗುಗಳ ವಿರುದ್ಧ ಖಚರ್ು ಮಾಡುವ ಆಥರ್ಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಕ್ತಿ ಬೇರೊಂದು ಮರುಹುಟ್ಟು ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ವ್ಯವಸ್ಥೆ ಜಡತೆಯ ಜೊತೆ ಹೋರಾಟ ನಡೆಸುತ್ತಲೇ ಇರಬೇಕಾಗುತ್ತದೆ. ಈ ಅಂಶವನ್ನು ತಿಳಿದಿರುವ ಜೀವಪರವಾದಿ ಕೆ.ಎಚ್.ರಂಗನಾಥ್ರು ಸಮಾಜದ ಎಲ್ಲ ಸ್ತರಗಳಿಗೂ ಹೊಸಜ್ಞಾನ ಹರಿದರೆ ಅದರಿಂದ ನಮ್ಮೆಲ್ಲಾ ಜನರ ಬದುಕು ವಿಕಸನಗೊಳ್ಳುತ್ತದೆ ಎಂಬುದನ್ನು ಮನಗೊಂಡು ಬಾಳುತ್ತಿದ್ದಾರೆ. ಕೆ.ಎಚ್.ರಂಗನಾಥ್ರು ತಮಗೆ ಸಿಕ್ಕ ಅಧಿಕಾರವನ್ನು ಮಂಗನಿಗೆ ದೊರೆತ ಮಾಣಿಕ್ಯವೆಂದು ಭಾವಿಸಲಿಲ್ಲ, ಶಿಲ್ಪಿಯೊಬ್ಬನಿಗೆ ದೊರೆತ ಉಳಿಯೆಂದು ಭಾವಿಸಿ ಅದರ ಮೂಲಕ ಅಮೂಲ್ಯವಾದ ನಾಡ ಕೆತ್ತನೆಗೆ ಮುಂದಾದರು. ಈ ನಾಡನ್ನು ಅಧಿಕಾರವೆಂಬ ಬಾಣದಿಂದ ಉನ್ನತವಾಗಿಸುವ ಶ್ರಮದಲ್ಲಿ ನಿರತರಾದರು. ಇವರನ್ನು ಬುದ್ಧಪ್ರಜ್ಞೆಯ ಜೀವಪರವಾದಿ ಎಂದು ಕರೆಯಲಾಗುತ್ತಿದ್ದೆ.
ಅಧಿಕಾರ ಎನ್ನುವುದು ಒಂದು ಬಸವನ ಹುಳುವಿನಷ್ಟು ಮೃದುವಾದದ್ದು ಉಕ್ಕಿನಂತೆ ಕಠಿಣವಾದದ್ದು ಎಂಬ ತಿಳಿವಳಿಕೆಯಿಂದ ಕೆ.ಎಚ್.ರಂಗನಾಥ್ ಅದನ್ನು ಉಪಯೋಗಿಸಿಕೊಳ್ಳಬೇಕಾದ ರೀತಿಯನ್ನು ಅನೇಕರಿಗೆ ಕಲಿಸಿದರು. ಶಿಸ್ತು, ನಿಭರ್ಾವುಕರಾಗಿ ಸತ್ಯವನ್ನು ಎತ್ತಿ ಹಿಡಿಯುವ ಛಲ, ಕೆಳಸ್ತರದ ಜನರ ಬಗೆಗಿನ ತೀವ್ರವಾದ ಒಲವು, ಕಾಳಜಿ ಹಾಗೆಯೇ ಕಠಿಣ ನಿಧರ್ಾರಗಳ ಎದೆಗಾರಿಕೆ ಕೆ.ಎಚ್.ರಂಗನಾಥ್ರ ವಿಶಿಷ್ಟ ಗುಣಗಳಾಗಿವೆ.
ಕೆ.ಎಚ್.ರಂಗನಾಥ್ ಒಬ್ಬ ನಿಜವಾದ ರಾಜಕಾರಣಿಗಿರಬೇಕಾದ ಸೂಕ್ಷತೆಗೆ, ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದಾರೆ. ಒಬ್ಬ ಅಧ್ಯಾಪಕನಿಗೆ, ಒಬ್ಬ ಸಾಹಿತಿಗೆ ಒಬ್ಬ ಕಲಾವಿದನಿಗೆ ಇರಬೇಕಾದ ಪ್ರಬುದ್ಧತೆ ಮತ್ತು ಸಾಮಾಜಿಕ ಕಾಳಜಿಯನ್ನು ಕೆ.ಎಚ್.ರಂಗನಾಥ್ ರಲ್ಲಿ ಕಾಣಲು ಸಾಧ್ಯ.
ಸಾರ್ವಜನಿಕ ವ್ಯಕ್ತಿಯಾಗಿ ಗುರುತಿಸಿಕೊಂಡವರು ಕಾಲಾತೀತನಾಗಿ ಸಮಾಜದ ಹೃದಯದಲ್ಲಿ ಉಳಿವುದು ತೀರಾ ಕಷ್ಟ, ಹೀಗೆ ಉಳಿಯಬೇಕಾದರೆ ಆತನಲ್ಲಿ ಇಡೀ ಜೀವಕೋಟಿಯನ್ನು ಕುರಿತ ಅಂತಃಕರಣದ ವಿಶಾಲತೆ ಬೇಕಾಗುತ್ತದೆ. ಬುದ್ದ, ಯೇಸು, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ನಾಲ್ವಡಿ ಕೃಷ್ಣರಾಜ ಒಡೆಯರ್, ಕರ್ಮಯೋಗಿ ಕರಿಯಪ್ಪ, ಜನೋಪಕಾರಿ ದೊಡ್ಡಣ್ಣಶೆಟ್ಟಿ, ಮಾನವತಾವಾದಿ ಮಲ್ಲಯ್ಯ, ಮೊದಲಾದವರಿಗಿದ್ದುದು ಇಂಥ ಅಂತಃಕರಣ ಇವರೆಲ್ಲರೂ ಒಂದು ವಿಧದಲ್ಲಿ ಮಹಾನ್ ರಾಜಕಾರಣಿಗಳೇ ಆಗಿದ್ದಾರೆ. ರಾಜಕೀಯ ಎಂಬುದು ಶಿಕ್ಷಣಕ್ಕಿಂತಲೂ ಕಲೆ, ಸಾಹಿತ್ಯ, ಸಂಗೀತಗಳಿಗಿಂತಲೂ ಅಮೂಲ್ಯವಾದದ್ದು; ಶಕ್ತಿಯುತವಾದದ್ದು, ಅದರಿಂದ ಮನುಷ್ಯನನ್ನು ಉನ್ನತ ಸ್ಥಿತಿಗೇರಿಸಲು ಸಾಧ್ಯವೆಂಬ ಅರಿವು ಮೇಲಿನ ಮಹಾತ್ಮರಿಗಿತ್ತು. ಈ ರೀತಿಯ ಸಾಮುದಾಯಿಕ ಗ್ರಹಿಕೆಯ ರಾಜಕಾರಣ ಎಲ್ಲರಿಂದಲೂ ಸಾಧ್ಯವಾಗದು. ಆದರೆ ಕನರ್ಾಟಕದಲ್ಲಿ ಶಾಂತವೇರಿಗೋಪಾಲಗೌಡ, ದೇವರಾಜ ಅರಸು ಒಡನಾಟದಲ್ಲಿ ಕಾಣಿಸಿಕೊಂಡ ಸಹೃದಯಿ ರಾಜಕಾರಣಿಗಳಲ್ಲಿ ಬುದ್ಧ ಪ್ರಜ್ಞೆಯ ಕೆ.ಎಚ್.ರಂಗನಾಥ್ ಮಲೆನಾಡ ಗಾಂಧಿ ಹೆಚ್.ಜಿ.ಗೋವಿಂದಗೌಡ ಎಂದರೆ ಅತಿಶಯೋಕ್ತಿಯಾಗಲಾರದು.
ನಾಗತಿಹಳ್ಳಿ ರಮೇಶ್
nagathihalliramesh@gmail.com